ಜೈಲ್ ಬ್ರೇಕ್ ಸಿನಿಮಗಳು ಕನ್ನಡದಲ್ಲಿ ವಿರಳ. ಅಂತಹ ಒಂದು ಚಿತ್ರ ಡೇ ಡ್ರೀಮ್ ಕ್ರಿಯೇಷನ್ಸ್ ಹಾಗೂ ಮಾಲ್ಗುಡಿ ಟಾಕೀಸ್ ಮಾಡಿದೆ. ಹೊಸ ಪ್ರತಿಭೆಗಳ ಸಂಗಮದ ಜೊತೆಗೆ ಅನಂತ್ ನಾಗ್ ಅಂತಹ ಅದ್ಬುತ ಕಲಾ ಪ್ರತಿಭೆ ‘ದಿ ಪ್ಲಾನ್’ ಸಿನಿಮಾದಲ್ಲಿ ಇದ್ದಾರೆ.
ಪ್ರಾದೇಶಿಕ ಸೆನ್ಸಾರ್ ಮಂಡಳಿ ‘ಯು/ಎ’ ಅರ್ಹತಾ ಪತ್ರವನ್ನು ನೀಡಿದೆ. ಅಶೋಕ್ ಶೆಟ್ಟಿ, ಸುನಿಲ್ ಶೆಟ್ಟಿ ಹಾಗೂ ಕೀರ್ತಿ ಈ ಚಿತ್ರದ ನಿರ್ಮಾಪಕರುಗಳು.
ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ನಿರ್ದೇಶನ ಕೀರ್ತಿ ನಿರ್ವಹಿಸಿದ್ದಾರೆ. ದೀಪಾಂಕರ್ ಸಿಕ್ಧರ್ ಛಾಯಾಗ್ರಹಣ, ಆಬ್ರೋ ಬ್ಯಾನರ್ಜಿ ಸಂಕಲನ, ರಿಚರ್ಡ್ ಹಾಗೂ ತೇಜಸ್ ಅವರ ಸಂಗೀತ ಒದಗಿಸಿದ್ದಾರೆ.
ತಾರಾಗಣದಲ್ಲಿ ಜೈಲರ್ ಆಗಿ ಅನಂತ್ ನಾಗ್, ಗೌತಮ್, ಕೌಸ್ತುಬ, ಜಯಕುಮಾರ್, ಹೇಮಂತ್, ಶ್ರೀರಾಮ್, ಜಗದೀಶ್, ಸನತ್ ಹಾಗೂ ಇತರರು ಇದ್ದಾರೆ.